ಕನ್ನಡದ ನಟ, ನಿರ್ದೇಶಕ ಮಾಸ್ಟರ್ ಕಿಶನ್ ಅವರಿಗೆ ಈಗ ಡಿಸ್ಕವರಿ ವಾಹಿನಿ ಸೆಲ್ಯೂಟ್ ಎಂದಿದೆ. ಮಕ್ಕಳ ದಿನಾಚರಣೆಯ ವಿಶೇಷವಾಗಿ ಡಿಸ್ಕವರಿ ವಾಹಿನಿ ಮಾಸ್ಟರ್ ಕಿಶನ್ ಗೆ ಶುಭಕೋರಿದೆ. ನಿನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ 'ಡಿಸ್ಕವರಿ ವಾಹಿನಿ ಇಂಡಿಯಾ' ಫೇಸ್ ಬುಕ್ ಪೇಜ್ ನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ ದೇಶದ ಹೆಸರನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ನಾಲ್ಕು ಮಕ್ಕಳ ಫೋಟೋವನ್ನು ಹಾಕಲಾಗಿತ್ತು. ಈ ಪೈಕಿ ಮಾಸ್ಟರ್ ಕಿಶನ್ ಕೂಡ ಒಬ್ಬರಾಗಿದ್ದರು. ಅಂದಹಾಗೆ, 'ಕೇರ್ ಆಫ್ ಪುಟ್ ಪಾತ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಕಿಶನ್ ವಿಶ್ವದ ಅತಿ ಚಿಕ್ಕ ವಯಸ್ಸಿನ ಚಿತ್ರ ನಿರ್ದೇಶಕನಾಗಿದ್ದಾರೆ. ತಮ್ಮ ಈ ಸಾಧನೆ ಮೂಲಕ ಕಿಶನ್ ಗಿನ್ನಿಸ್ ದಾಖಲೆಗೂ ಸಹ ಪಾತ್ರರಾಗಿದ್ದಾರೆ. <br /> <br /> Discovery channel recognizes Master Kishen's achievement and salutes him on their facebook page. Watch the video to know why. <br />